ನಾಡಿ ಜ್ಯೋತಿಷವು ತಮಿಳುನಾಡು, ಕೇರಳ ಮತ್ತು ಪಕ್ಕದ ಪ್ರದೇಶಗಳಲ್ಲಿ ಅಭ್ಯಸಿಸಲ್ಪಡುವ ಧರ್ಮ ಜ್ಯೋತಿಷದ ಒಂದು ರೂಪವಾಗಿದೆ. ಇದು ಎಲ್ಲ ಮನುಷ್ಯರ ಭೂತ, ವರ್ತಮಾನ ಮತ್ತು ಭವಿಷ್ಯದ ಜೀವನಗಳನ್ನು ಪ್ರಾಚೀನ ಕಾಲದಲ್ಲಿನ ಧರ್ಮ ಋಷಿಗಳು ಮುಂಗಂಡಿದ್ದರು ಎಂಬ ನಂಬಿಕೆ ಮೇಲೆ ಆಧಾರಿತವಾಗಿದೆ. == ಸಿದ್ಧಾಂತ == ನಾಡಿ ಜ್ಯೋತಿಷದ ಮೂಲಭೂತ ಪರಿಕಲ್ಪನೆಯೆಂದರೆ "ನಾಡಿ". ಒಂದು ರಾಶಿಯಲ್ಲಿ ೧೫೦ ನಾಡಿಗಳಿರುತ್ತವೆ; ಒಂದು ರಾಶಿಯೆಂದರೆ ೩೦ ಕೋನಮಾನಗಳು. ರಾಶಿಚಕ್ರದ ಹನ್ನೆರಡು ರಾಶಿಗಳನ್ನು ಮೂರು ವರ್ಗಗಳಾಗಿ ಗುಂಪುಮಾಡಲಾಗುತ್ತದೆ: ಚರ, ಸ್ಥಿರ ಮತ್ತು ದ್ವಿಸ್ವಭಾವ ರಾಶಿಗಳು. ೧೫೦ ನಾಡಿಗಳ ನಾಮಕರಣವು ರಾಶಿಗಳ ಈ ಮೂರು ಪ್ರಕಾರಗಳಿಗೆ ವಿಶಿಷ್ಟವಾಗಿದೆ. ೩೬೦ ಕೋನಮಾನಗಳಲ್ಲಿ ೧,೮೦೦ ನಾಡಿಗಳಿವೆ. ಸಂಪೂರ್ಣ ರಾಶಿಚಕ್ರದಲ್ಲಿ ೪೫೦ ವಿಶಿಷ್ಟ ಹೆಸರುಗಳು ಮತ್ತು ಸಂಖ್ಯೆಗಳಿವೆ. ನಾಡಿ ಗ್ರಂಥಗಳು ಭವಿಷ್ಯವಾಣಿಯ ಮೂಲಭೂತ ಏಕಮಾನವಾಗಿ ನಾಡಿಯ ಈ ಪರಿಕಲ್ಪನೆಯನ್ನು ಬಳಸುತ್ತವೆ. ಹಾಗಾಗಿಯೇ ಅವನ್ನು "ನಾಡಿ ಅಂಶಗಳು" ಎಂದು ಕರೆಯಲಾಗುತ್ತದೆ. == ಉಲ್ಲೇಖಗಳು ==